ಲಿಂಗಯಾತ್ ಯುವಾ

 
ಶರಣು ಶರಣಾರ್ಥಿ,
ವಿಶ್ವಕ್ರಾಂತಿ ಗುರು *ಬಸವಣ್ಣನವರ* ಕ್ರಾಂತಿಕಾರಿ ವಿಚಾರಗಳಿಂದ ಪ್ರೇರಣೆ ಪಡೆದು  ಮತ್ತು ಲಿಂಗಾಯತ ಧರ್ಮದ ಮಹಾನ ತತ್ವಶಾಸ್ತ್ರ ಪರಂಪರೆಯ ಮೂಲದಿಂದ ಕೂಡಿರುವ *’ಲಿಂಗಾಯತ ಯುವ.ಕಾಮ್’* ಇದು ಜಾಗತಿಕ  ಶರಣ – ಶರಣಿಯರ ಕ್ರಾಂತಿಯ ಕಹಳೆಯನ್ನು ಜಗತ್ತಿನಲ್ಲಿಯ ಎಲ್ಲ *ಲಿಂಗಾಯತ ಧರ್ಮದವರನ್ನು* ಒಂದುಗೂಡಿಸಲು ಮತ್ತು  ಮಹಾನ್ ಆಧ್ಯಾತ್ಮಿಕ, ಸಾಮಾಜಿಕ,ರಾಜಕೀಯ ಕ್ರಾಂತಿಯ ಸ್ವರೂಪ ವಿಷಯದ ಬಗ್ಗೆ ಅರಿವು ಮೂಡಿಸಲು ತಯಾರಿಸಲಾಗಿದೆ.
*ಲಿಂಗಾಯತ ಯುವ* ಈ ಜಾಲತಾಣವು ಲಿಂಗಾಯತ ಧರ್ಮದ ಯುವಕ-ಯುವತಿ,ಮಹಿಳೆ, ಹಿರಿಯ ನಾಗರಿಕರಿಗಾಗಿ ವೈವಿಧ್ಯಮಯ ಮಾಹಿತಿ, ಸುದ್ಧಿಗಳು ,ಪ್ರಚಲಿತ ಘಟನೆಗಳ ವಿಶ್ಲೇಷಣೆಯನ್ನು ಕೊಡಲಾಗುತ್ತದೆ ಮತ್ತು ಲಿಂಗಾಯತ ಧರ್ಮದ ಜಾಗೃತಿಯ ಸಮಗ್ರ ಕೆಲಸದಲ್ಲಿ ನಿಮ್ಮನ್ನು ಬೆಳೆಸುವ ಪ್ರಯತ್ನ ಮಾಡಲಿದೆ.
ಸ್ವತಂತ್ರ ಲಿಂಗಾಯತ ಧರ್ಮದಲ್ಲಿನ ಎಲ್ಲ ಲಿಂಗಾಯತ ಆಧ್ಯಾತ್ಮಿಕ ಮತ್ತು ಕಾಯಕ ಪರಂಪರೆಯನ್ನು ಒಂದುಗೂಡಿಸುವದು ಮತ್ತು ಧರ್ಮ ಬೆಳೆಸಲು ಪ್ರಯತ್ನಪಡುವದು, *ಬಸವಕ್ರಾಂತಿಯ* ವಿಚಾರಗಳ ಜಾಗತಿಕ ಪ್ರಚಾರ ಮತ್ತು ಪ್ರಸಾರ ,ಲಿಂಗಾಯತ ತತ್ವಶಾಸ್ತ್ರದ ಐತಿಹಾಸಿಕ ಮತ್ತು ಈ ಯುಗದ ಮಹತ್ವವನ್ನು ತಿಳಿಸುವದು, ಸ್ಥಾನಿಕವಲ್ಲದೆ ಜಗತ್ತಿನ ವಿಕಾಸದ ಯೋಜನೆಯಲ್ಲಿ ಮತ್ತು ವಿಕಾಸದ ವಿಚಾರಗಳಲ್ಲಿ *’ಅನುಭವ ಮಂಟಪ’* ದ ಲೋಕಕಲ್ಯಾಣದ ಚೌಕಟ್ಟಿನಲ್ಲಿ ಸಹಭಾಗಿಯಾಗುವುದು ಮತ್ತು ಲಿಂಗಾಯತ ಸಿದ್ಧಾಂತಕ್ಕೆ ಜಾಗತಿಕ ತಳಹದಿಯನ್ನು ಸಿದ್ಧಮಾಡಿ ತೋರಿಸುವದು ಅದರಂತೆ ಇನ್ನು ಅನೇಕ ಮಹತ್ವದ ಕಾರ್ಯಗಳಿಗೆ ಉತ್ತೇಜನೆ ಕೊಡುವದು, ಅದರ ಸಲುವಾಗಿ ಬೇಕಾದ ಜ್ಞಾನವನ್ನು ಕೊಡುವ ಸಲುವಾಗಿ *ಲಿಂಗಾಯತ ಯುವ. ಕಾಮ್* ಪ್ರಯತ್ನಪಡುತ್ತಿದೆ.
ಈ ಉಪಕ್ರಮದಲ್ಲಿ ನೀವು ಸಹಿತ ಭಾಗವಹಿಸಿ ನಿಮ್ಮ ಕೊಡುಗೆಯನ್ನು ನೀಡಬೇಕಾಗಿ ವಿನಂತಿ.

Note: Lingayat Yuva. Com is thankful to Hanmant Nellure Sir for helping us with translation of this page from Marathi to Kannada.
आदरणीय हनमंत नेल्लुरे सरांचे या पानाचे भाषांतर करून दिल्याबद्दल लिंगायत युवा. कॉम तर्फे हार्दिक आभार.
Print Friendly, PDF & Email